ಬೆಂಗಳೂರು: ಸಿನಿಮಾವಿರಲಿ, ಧಾರವಾಹಿಯಿರಲಿ, ಬಣ್ಣದ ಬದುಕಿನಲ್ಲಿ ಕಲಾವಿದರು ಮತ್ತು ನಿರ್ಮಾಪಕರ ನಡುವೆ ವೈಮನಸ್ಯ ಬಂದಾಗ ಹೆಚ್ಚಾಗಿ ಕಲಾವಿದನೇ ನಷ್ಟ ಅನುಭವಿಸುತ್ತಾನೆ. ಇದಕ್ಕೆ ಕಾರಣವೂ ಇದೆ.ಕಿರುತೆರೆ ಇರಲಿ, ಹಿರಿತೆರೆ ಇರಲಿ, ಯಾವುದೇ ಸಮಸ್ಯೆ ಬಂದಾಗ ನಿರ್ಮಾಪಕರು ಒಗ್ಗಟ್ಟಾಗುವಂತೆ ಕಲಾವಿದರು ಇನ್ನೊಬ್ಬ ಕಲಾವಿದನಿಗಾದ ಅನ್ಯಾಯವನ್ನು ಪ್ರಶ್ನಿಸುವ ಅಥವಾ ಬಹಿರಂಗವಾಗಿ ಅವರ ಜೊತೆ ನಿಲ್ಲುವ ಸಾಹಸ ಮಾಡುವುದಿಲ್ಲ.ಕಾರಣ, ಅನ್ನದಾತ ನಿರ್ಮಾಪಕನೇ ಆಗಿರುತ್ತಾನೆ. ಯಾರಿಗೇ ಆದರೂ ಕೊನೆಗೆ ಲಾಭವೇ ಮುಖ್ಯವಾಗುತ್ತದೆ. ಕಲಾವಿದ ಹೊಟ್ಟೆಪಾಡಿಗಾಗಿ ನಟನೆ ಮಾಡುತ್ತಾನೆ.