ರಾಧಿಕಾ ಪಂಡಿತ್ ಆದಿಲಕ್ಷ್ಮಿ ಪುರಾಣ ಸಿನಿಮಾಗೆ ನಾಯಕಿಯಾಗಲು ಈ ನಟಿಯೇ ಕಾರಣ!

ಬೆಂಗಳೂರು, ಸೋಮವಾರ, 15 ಜುಲೈ 2019 (09:53 IST)

ಬೆಂಗಳೂರು: ಮದುವೆಯಾದ ಬಳಿಕ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಅಭಿನಯದ ಮೊದಲ ಚಿತ್ರ ಆದಿ ಲಕ್ಷ್ಮಿ ಪುರಾಣ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟ್ರೈಲರ್ ನ್ನು ಇತ್ತೀಚೆಗಷ್ಟೇ ರಾಧಿಕಾ ಪತಿ, ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ.


 
ಟ್ರೈಲರ್ ಲಾಂಚ್ ಸಮಯದಲ್ಲಿ ಯಶ್ ಈ ಸಿನಿಮಾ ರಾಧಿಕಾ ತೆಕ್ಕೆಗೆ ಬರಲು ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಕಾರಣ ಎಂಬ ವಿಚಾರ ಬಹಿರಂಗಪಡಿಸಿದ್ದಾರೆ. ಈ ಸಿನಿಮಾ ನಿರ್ದೇಶಕಿ ಪ್ರಿಯಾ ಮಣಿರತ್ನಂ ಸಹಾಯಕಿಯಾಗಿ ಕೆಲಸ ಮಾಡಿದವರು.
 
ಸ್ವತಃ ಸುಹಾಸಿನಿಯೇ ಪ್ರಿಯಾರನ್ನು ಈ ಕತೆ ಕೇಳಲು ಯಶ್ ಬಳಿ ಕಳುಹಿಸಿದ್ದರಂತೆ. ಸುಹಾಸಿನಿ ಸೂಚಿಸಿದ್ದಕ್ಕೆ ಯಶ್-ರಾಧಿಕಾ ಈ ಕತೆ ಕೇಳಿದರಂತೆ. ಕೊನೆಗೆ ಕತೆ ಇಷ್ಟವಾಗಿ ರಾಕ್ ಲೈನ್ ವೆಂಕಟೇಶ್ ಗೆ ಸಿನಿಮಾ ನಿರ್ಮಿಸಲು ಸ್ವತಃ ಯಶ್ ಮನವಿ ಮಾಡಿದಾಗ ಅವರೂ ಇಷ್ಟಪಟ್ಟು ಒಪ್ಪಿಕೊಂಡರಂತೆ. ಅಂತೂ ಇದೀಗ ಆದಿ ಲಕ್ಷ್ಮಿ ಪುರಾಣ ತೆರೆಗೆ ಬರಲು ಸಿದ್ಧವಾಗಿದೆ. ಇದೇ ವಾರಂತ್ಯಕ್ಕೆ ವೀಕ್ಷಿಸಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡಿ ಬಾಸ್ ದರ್ಶನ್ ಗೆ ಚಿರಂಜೀವಿ ಸರ್ಜಾ ದಂಪತಿ ಕೊಟ್ಟ ಆ ಗಿಫ್ಟ್ ಏನು ಗೊತ್ತಾ?!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದೇ ...

news

ಡಿ ಬಾಸ್ ದರ್ಶನ್ ಅಭಿನಯದ ಯಜಮಾನ ಕಿರುತೆರೆಯಲ್ಲಿ!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ...

news

ಕನ್ನಡ ಪ್ರೇಕ್ಷಕರಿಂದ ಮತ್ತೆ ಟ್ರೋಲ್ ಗಳಗಾದ ರಶ್ಮಿಕಾ ಮಂದಣ್ಣ

ಬೆಂಗಳೂರು: ರಕ್ಷಿತ್ ಶೆಟ್ಟಿ ಜತೆಗಿನ ಎಂಗೇಜ್ ಮೆಂಟ್ ಮುರಿದುಕೊಂಡು ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ...

news

ಡಿಯರ್ ಕಾಮ್ರೇಡ್ ಕನ್ನಡ ಅವತರಣಿಕೆಯಲ್ಲಿ ವಿಜಯ್ ದೇವರಕೊಂಡ ಧ್ವನಿ ಬಗ್ಗೆ ಅಪಸ್ವರವೆತ್ತಿದ ಕನ್ನಡಿಗರು

ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು ...