ಇದ್ದಕ್ಕಿದ್ದಂತೆ ಸೀರಿಯಲ್ ಬಿಟ್ಟ ಈ ನಟಿ ಬಿಗ್ ಬಾಸ್ ಮನೆಗೆ?

ಬೆಂಗಳೂರು| Krishnaveni K| Last Modified ಬುಧವಾರ, 24 ಫೆಬ್ರವರಿ 2021 (09:47 IST)
ಬೆಂಗಳೂರು: ರಿಯಾಲಿಟಿ ಶೋ ಆರಂಭಕ್ಕೆ ಇನ್ನು ಕೇವಲ ನಾಲ್ಕು ದಿನ ಬಾಕಿಯಿದೆ. ಈ ನಡುವೆ ಈ ರಿಯಾಲಿಟಿ ಶೋ ಸ್ಪರ್ಧಿಗಳಾಗುವವರ ಬಗ್ಗೆ ಊಹಾಪೋಹಗಳು ನಡೆದಿವೆ.

 
ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ‘ಕಸ್ತೂರಿ ನಿವಾಸ’ ನಾಯಕಿ ನಟಿ ಅಮೃತಾ ರಾಮಮೂರ್ತಿ ದಿಡೀರ್ ಆಗಿ ಸೀರಿಯಲ್ ನಿಂದ ಹೊರಬಿದ್ದಿದ್ದಾರೆ. ಅವರು ಹೊರಬರಲು ಬಿಗ್ ಬಾಸ್ ಗೆ ಸ್ಪರ್ಧಿಸುತ್ತಿರುವುದು ಕಾರಣವಿರಬಹುದು ಎಂಬ ಊಹಾಪೋಹಗಳು ಎದ್ದಿವೆ. ಆದರೆ ಈ ಬಗ್ಗೆ ನಟಿ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :