ಚೆನ್ನೈ : ರಜನೀಕಾಂತ್ ಅಭಿನಯದ ‘ಬೆಟ್ಟಾ’ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಕಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಅವರೊಂದಿನ ಕೆಲಸದ ಬಗ್ಗೆ ಮಾತನಾಡುವುದರ ಮೂಲಕ ಕಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದಾರೆ. ಕಮಾಲ್ ಹಾಸನ್ ಅಭಿನಯದ ‘ಹೇ ರಾಮ್’ ಚಿತ್ರದಲ್ಲಿ ನಟ ನವಾಜುದ್ದೀನ್ ಸಿದ್ಧಿಕಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆದರೆ ಚಿತ್ರಕ್ಕೆ ಅಂತಿಮ ರೂಪ ಕೊಡುವ ವೇಳೆ ಅವರ ದೃಶ್ಯ ಉದ್ದವಾದ ಕಾರಣ ಅದನ್ನು ಚಿತ್ರದಿಂದ