ಸಮಂತಾ ನಿರೂಪಣೆಯಲ್ಲಿ ನಡೆಯಲಿದೆ ಈ ಹೊಸ ಟಾಕ್ ಶೋ ಕಾರ್ಯಕ್ರಮ

ಹೈದರಾಬಾದ್| pavithra| Last Modified ಮಂಗಳವಾರ, 17 ನವೆಂಬರ್ 2020 (14:19 IST)
ಹೈದರಾಬಾದ್ : ತಮಿಳು ಹಾಗೂ ತೆಲುಗು ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಸಮಂತಾ  ಇದೀಗ ನಟನೆಯನ್ನು ಪಕ್ಕಕ್ಕೆ ಸರಿಸಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೌದು. ನಟಿ ಸಮಂತಾ ಅವರು ತೆಲುಗಿನಲ್ಲಿ ಪ್ರಸಾರವಾಗಲಿರುವ ‘ಸ್ಯಾಮ್ ಜಾಮ್’ ಟಾಕ್ ಶೋ ನಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ನಟ ವಿಜಯ ದೇವರಕೊಂಡ ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಹಾಗೇ ಈ ಕಾರ್ಯಕ್ರಮ ಪ್ರದರ್ಶನದ 10 ಸಂಚಿಕೆಗೆ ಸಮಂತಾ ಅವರಿಗೆ 1.5ಕೋಟಿ ರೂ. ನೀಡಲಾಗುತ್ತಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :