ಸಖತ್ ವೈರಲ್ ಆಗಿದೆ ಸಮಂತಾ ಪೋಸ್ಟ್ ಮಾಡಿದ ಈ ಪೋಟೊ

ಹೈದರಾಬಾದ್| pavithra| Last Modified ಶುಕ್ರವಾರ, 16 ಅಕ್ಟೋಬರ್ 2020 (09:23 IST)
ಹೈದರಾಬಾದ್ : ನಟಿ ಸಮಂತಾ ಅಕ್ಕಿನೇನಿ ಅವರು ಮಾಡೆಲಿಂಗ್ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು, ಬಳಿಕ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿನ್ನೈತಂಡಿ ವರುವಾಯು ಚಿತ್ರದಲ್ಲಿ ನಟ ಸಿಂಬು ಗೆಳತಿಯಾಗಿ ಪಾದಾರ್ಪಣೆ ಮಾಡಿದ ಸಮಂತಾ ತೆಲುಗು ರಿಮೇಕ್ ನಲ್ಲಿ ತ್ರಿಶಾ ಪಾತ್ರದಲ್ಲಿ ನಟಿಸಿ ದೊಡ್ಡ ಯಶಸ್ಸು ಗಳಿಸಿದ್ದಾರೆ. ಅದರ ನಂತರ ಅವರು ಬಾನಾ ಕೈಟ್, ನಡುನಿಚಿ ನಾಯ್ಕಲ್, ನೀಥೇನ್ ಎನ್ ಪೊನ್ನಶಾಂಥಮ್, ಅಂಜಾನ್ , ಕಥಿ, ಥೆರಿ, ಮರ್ಸಲ್ ಮುಂತಾದ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.> > ಹಾಗೇ ಈ ವರ್ಷ ಅವರು ಜಾನು ಎಂಬ ತೆಲುಗು ಚಿತ್ರದಲ್ಲಿ ನಟಿಸಿ ಸಾಕಷ್ಟು ಪ್ರತಿಕ್ರಿಯೆ ಪಡೆದರು. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಪೋಸ್ಟ್ ಮಾಡಿದ ಫೋಟೋಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇರೀತಿಯಲ್ಲಿ ಇದೀಗ ಅವರು ಬನಿಯನ್ ಧರಿಸಿದ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :