ಬೆಂಗಳೂರು : ನಟ ಶಂಕರ್ ಅಶ್ವಥ್ ಅವರು ಇದೀಗ ಕನ್ನಡದ ಸ್ಟಾರ್ ನಟರೊಬ್ಬರನ್ನು ಡಾ. ರಾಜಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರಿಗೆ ಹೋಲಿಸಿದ್ದಾರೆ. ಕನ್ನಡದ ಹಿರಿಯ ನಟ ಅಶ್ವಥ್ ಅವರ ಮಗ ನಟ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಆಫರ್ ಗಳು ಸಿಗದೇ ಜೀವನ ಸಾಗಿಸಲು ಉಬರ್ ಕ್ಯಾಬ್ ಡ್ರೈವರ್ ಆಗಿದ್ದರು. ಈ ವಿಷಯ ತಿಳಿದ ನಟ ದರ್ಶನ್ ಅವರು ಶಂಕರ್ ಅಶ್ವಥ್ ಅವರಿಗೆ ಯಜಮಾನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದರು.