ಬೆಂಗಳೂರು: ಮತ್ತೊಂದು ಶುಕ್ರವಾರ ಬಂದಿದೆ. ಗಾಂಧಿನಗರ ಮತ್ತಷ್ಟು ಹೊಸ ಚಿತ್ರಗಳನ್ನು ಹೊತ್ತು ತಂದಿದೆ. ಇಂದು ಪ್ರಮುಖವಾಗಿ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ.100: ರಮೇಶ್ ಅರವಿಂದ್ ನಿರ್ದೇಶಿಸಿ, ಅಭಿನಯಿಸಿರುವ ‘100’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಂ, ಪೂರ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಸೈಬರ್ ಕ್ರೈಂ ಆಧಾರಿತ ಕತೆ ಹೊಂದಿದೆ.ಗರುಡಗಮನ ವೃಷಭ ವಾಹನ: ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಗರುಡಗಮನ ವೃಷಭ ವಾಹನ ಟ್ರೈಲರ್ ನಿಂದಲೇ ಎಲ್ಲರ