ಮುಂಬೈ: ಕಿಂಗ್ ಖಾನ್ ತಮ್ಮ ಝೀರೋ ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಜಬ್ ತಕ್ ಹೈ ಜಾನ್ ಚಿತ್ರದ 5 ವರ್ಷಗಳ ನಂತರ ಇನ್ನೊಮ್ಮೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್, ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್. ಈ ಮೂವರು ಆನಂದ್ ಎಲ್ ರಾಯ್ ಅವರ ಝೀರೋ ಚಿತ್ರದಲ್ಲಿ ಒಂದಾಗಲಿದ್ದಾರೆ.