ತಮ್ಮ ಮೊದಲ ಚಿತ್ರಕ್ಕೆ 21 ವರ್ಷ ತುಂಬಿದ ಸಂತಸ ಹಂಚಿಕೊಂಡ ಟಾಲಿವುಡ್ ಫ್ರಿನ್ಸ್

ಹೈದರಾಬಾದ್| pavithra| Last Modified ಶುಕ್ರವಾರ, 31 ಜುಲೈ 2020 (15:20 IST)
ಹೈದರಾಬಾದ್ : ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರಕ್ಕೆ  21 ವರ್ಷ ತುಂಬಿದ ಹಿನ್ನಲೆಯಲ್ಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಹೌದು. ಮಹೇಶ್ ಬಾಬು ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ ‘ರಾಜಕುಮಾರುಡು’. ಈ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಜುಲೈ 30ರಂದು 21 ವರ್ಷ ತುಂಬಿದೆ.

ಈ ಹಿನ್ನಲೆಯಲ್ಲಿ ತಮಗೆ ನಾಯಕನಾಗಿ ನಟಿಸುವ ಅವಕಾಶ ನೀಡಿದ ಚಿತ್ರದ ನಿರ್ದೇಶಕರಾಘವೇಂದ್ರ ರಾವ್ ಹಾಗೂ ಚಿತ್ರತಂಡಕ್ಕೆ ಅವರು ಟ್ವೀಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :