ಕೋಲಿವುಡ್ ಬೆಡಗಿ ತ್ರಿಷಾ ಕೃಷ್ಣನ್ ಎರಡನೇ ಇನ್ನಿಂಗ್ಸ್ಗೆ ರೆಡಿಯಾಗಿದ್ದಾರೆ. ಹಸೆಮಣೆ ತನಕ ಬಂದಿದ್ದ ಮದುವೆ ಕೊನೆ ಕ್ಷಣದಲ್ಲಿ ರದ್ದಾದ ಮೇಲೆ ಈಗ ಸಿನಿಮಾಗಳ ಮೇಲೆ ಗಮನನೆಟ್ಟಿದ್ದಾರೆ ತ್ರಿಷಾ. ಮಹಿಳಾ ಪ್ರಧಾನ ಚಿತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ. ಸದ್ಯಕ್ಕೆ ತಮಿಳು ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿರುವ ತ್ರಿಷಾ ಶೀಘ್ರದದಲ್ಲೇ ಸ್ಟಾರ್ ಹೀರೋ ಜೊತೆಗೂ ಅಭಿನಯಿಸಲಿದ್ದಾರಂತೆ. ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಸದಾ ಮುಂದಿರುವ ಟಾಲಿವುಡ್ ಹೀರೋ ನಾಗಾರ್ಜುನ ಜೊತೆ ತೆರೆಹಂಚಿಕೊಳ್ಳಲು ರೆಡಿಯಾಗಿದ್ದಾರೆ ತ್ರಿಷಾ.