ಪುನೀತ್ ‘ದ್ವಿತ’ಗೆ ತಮಿಳಿನ ಈ ಖ್ಯಾತ ನಟಿ ಹೀರೋಯಿನ್?

ಬೆಂಗಳೂರು| Krishnaveni K| Last Modified ಮಂಗಳವಾರ, 27 ಜುಲೈ 2021 (10:41 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ‘ದ್ವಿತ’ ಸಿನಿಮಾದ ನಾಯಕಿ ಬಗ್ಗೆ ಈಗ ಸುದ್ದಿಯೊಂದು ಹರಿದಾಡುತ್ತಿದೆ.

 
ಪವನ್ ಕುಮಾರ್ ನಿರ್ದೇಶಿಸಲಿರುವ ಈ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಪುನೀತ್ ಗೆ ನಾಯಕಿಯಾಗಿ ಬಹುಭಾಷಾ ನಟಿ ತ್ರಿಶಾ ಬರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ತ್ರಿಶಾ ‘ಪವರ್’ ಸಿನಿಮಾದಲ್ಲಿ ಪುನೀತ್ ಗೆ ಜೋಡಿಯಾಗಿದ್ದರು. ಅದು ಅವರ ಮೊದಲ ಕನ್ನಡ ಸಿನಿಮಾವಾಗಿತ್ತು.
 
ಈಗ ತ್ರಿಶಾ ಜೊತೆಗೆ ದ್ವಿತ ಚಿತ್ರತಂಡ ಮಾತುಕತೆ ನಡೆಸುತ್ತಿದೆಯಂತೆ. ಒಂದು ವೇಳೆ ಅವರು ಒಪ್ಪಿಕೊಂಡಿರೆ ತ್ರಿಶಾ ಎರಡನೇ ಬಾರಿ ಪುನೀತ್ ಗೆ ನಾಯಕಿಯಾಗಿ ಸ್ಯಾಂಡಲ್  ವುಡ್ ಗೆ ಬರಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :