ಬೆಂಗಳೂರು: ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾದ ಪ್ರಚಾರಾರ್ಥವಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಚಿತ್ರತಂಡದ ಜೊತೆಗೆ ನಾಯಕಿ ತ್ರಿಶಾ ಕೃಷ್ಣನ್ ಕೂಡಾ ವೇದಿಕೆಯಲ್ಲಿದ್ದರು.ತ್ರಿಶಾ ಈಗಾಗಲೇ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾವೊಂದನ್ನು ಮಾಡಿದ್ದರು. ಜೊತೆಗೆ ಪುನೀತ್ ಅಭಿನಯಿಸಬೇಕಿದ್ದ ದ್ವಿತ ಸಿನಿಮಾಗೂ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದರು. ದುರದೃಷ್ಟವಶಾತ್ ಸಿನಿಮಾ ಸೆಟ್ಟೇರುವ ಮೊದಲೇ ಪುನೀತ್ ತೀರಿಕೊಂಡರು.ನಿನ್ನೆ ವೇದಿಕೆಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ತ್ರಿಶಾ ‘ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದು ಪವರ್ ಸಿನಿಮಾ