ಬೆಂಗಳೂರು : ಕಿರುತೆರೆ ನಟಿ ಸುಶ್ಮಿತಾ ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ ನಟಿ ಸುಶ್ಮಿತಾ ಅವರಿಗೆ ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವವರು ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿ ಲಕ್ಷಾಂತರ ರೂ. ತೆಗೆದುಕೊಂಡು ವಂಚಿಸಿದ್ದಾರೆ. ಇವರ ಜೊತೆಗೆ ಅವರ ಸ್ನೇಹಿತೆ ಸರೋಜ ಎನ್ನುವವರಿಗೂ ವಂಚನೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.