ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಇಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಮೊದಲ ಶೋ ನೋಡಿದ ಪ್ರೇಕ್ಷಕರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇಂಥಾ ಅವತಾರದಲ್ಲಿ ಪುನೀತ್ ರನ್ನು ಮೊದಲೆಂದೂ ನೋಡಿರಲೇ ಇಲ್ಲ. ಆರಂಭದಿಂದಲೇ ಕತೆ ನೋಡಿಸಿಕೊಂಡು ಹೋಗುತ್ತದೆ. ಅದರಲ್ಲೂ ಪುನೀತ್ ಕಾಲೇಜು ಹುಡುಗನಾಗಿ ಟ್ರಾನ್ಸ್ ಫೋರ್ಮೇಷನ್ ಆಗಿರುವುದು ಅದ್ಭುತ. ಪುನೀತ್ ಜೊತೆಗೆ ಡಾಲಿ ಧನಂಜಯ್, ಪ್ರಕಾಶ್ ರಾಜ್ ಪೈಪೋಟಿಯ ಅಭಿನಯ ನೀಡಿದ್ದಾರೆ.