ಹೈದರಾಬಾದ್: ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ಅಭಿನಯದ ಲೈಗರ್ ಸಿನಿಮಾ ಇಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ.ಆದರೆ ಲೈಗರ್ ಸಿನಿಮಾಗೆ ಇದುವರೆಗೆ ಇದ್ದ ಕ್ರೇಜ್, ಹೈಪ್ ಗಳೆಲ್ಲಾ ತಲೆಯಲ್ಲಿಟ್ಟುಕೊಂಡು ಸಿನಿಮಾ ನೋಡಲು ಹೋದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಮೊದಲ ಶೋ ನೋಡಿದ ಪ್ರೇಕ್ಷಕರು ಇದು ಬರೀ ಬಿಲ್ಡಪ್ ಸಿನಿಮಾ ಎಂದು ನೆಗೆಟಿವ್ ರಿವ್ಯೂ ಮಾಡುತ್ತಿದ್ದಾರೆ.ಫಸ್ಟ್ ಹಾಫ್ ವರೆಗೂ ವಿಲನ್ ಇಲ್ಲ. ಬರೀ ವಿಜಯ್ ದೇವರಕೊಂಡಗೆ ಬಿಲ್ಪಪ್, ಅವರ ಬಾಡಿ ಬಿಲ್ಡಪ್ ನೋಡಲು ಈ ಸಿನಿಮಾ ನೋಡಬೇಕಷ್ಟೇ.