Widgets Magazine

ಸಂಕ್ರಾಂತಿ ದಿನಕ್ಕೆ ಎರಡು ಸಿನಿಮಾಗಳಿಗೆ ಮುಹೂರ್ತ

ಬೆಂಗಳೂರು| Krishnaveni K| Last Modified ಬುಧವಾರ, 15 ಜನವರಿ 2020 (08:55 IST)
ಬೆಂಗಳೂರು: ಸಂಕ್ರಾಂತಿ ದಿನದ ಶುಭ ಗಳಿಗೆಯಲ್ಲಿ ಇಂದು ಹೊಸಬರ ಎರಡು ಸಿನಿಮಾಗಳ ಮುಹೂರ್ತ ಕಾರ್ಯಕ್ರಮಗಳು ನೆರವೇರಲಿವೆ.

 
ಕೆಜಿಎಫ್ 1 ಸಿನಿಮಾ ಸಂಭಾಷಣೆಕಾರ ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ ಆಂಡ್ ಜೆರ್ರಿ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ಪಂಚಮುಖಿ ಗಣೇಶ ದೇವಸ್ಥಾನದಲ್ಲಿ ನೆರವೇರಲಿದೆ. ಗಂಟುಮೂಟೆ ಖ್ಯಾತಿಯ ನಿಶ್ಚಿತ್ ಮತ್ತು ಚೈತ್ರಾ ರಾವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಯೂಥ್ ಫುಲ್ ಸ್ಟೋರಿ ಇದು.
 
‘ಬಂಪರ್’ ಎನ್ನುವ ಇನ್ನೊಂದು ಸಿನಿಮಾಗೂ ಇಂದೇ ಚಾಲನೆ ಸಿಗುತ್ತಿದೆ. ಗವಿಪುರದ ಬಂಡೆ ಮಹಾಕಾಳಿ ದೇವಾಲಯದಲ್ಲಿ  ಧನ್ವೀರ್ ಅವರ ಬಂಪರ್ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ನೀಡಲಿದ್ದಾರೆ. ಈ ಮೂಲಕ ಒಳ್ಳೆ ದಿನ ಎರಡು ಹೊಸಬರ ಚಿತ್ರಗಳಿಗೆ ಚಾಲನೆ ಸಿಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :