Widgets Magazine

ಶೃತಿ ಬೆನ್ನ ಹಿಂದೆ ಇಬ್ಬರು ಕನ್ನಡದ ನಟರು ನಿಂತಿದ್ದಾರೆ- ಪ್ರಶಾಂತ್ ಸಿಂಬರ್ಗಿಯಿಂದ ಸ್ಫೋಟಕ ಮಾಹಿತಿ

ಬೆಂಗಳೂರು| pavithra| Last Modified ಶುಕ್ರವಾರ, 26 ಅಕ್ಟೋಬರ್ 2018 (07:04 IST)
ಬೆಂಗಳೂರು : ನಟ ಅರ್ಜುನ್ ಸರ್ಜಾ ಅವರ ಮೇಲೆ ನಟಿ ಶೃತಿ ಹರಿಹರನ್ ಮಾಡಿರುವ ಮೀಟೂ ಆರೋಪದ ಬಗ್ಗೆ ದಿನದಿನೇ ಸ್ಫೋಟಕ ಮಾಹಿತಿಗಳು ಕೇಳಿಬರುತ್ತಿದ್ದು, ಇದೀಗ ಅರ್ಜುನ್ ಸರ್ಜಾರ ವಕೀಲ, ಆಪ್ತ ಪ್ರಶಾಂತ್ ಸಿಂಬರ್ಗಿ ಹೊಸ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.


ಫಿಲ್ಮ್ ಚೇಂಬರ್ ನಲ್ಲಿ ನಡೆದ ಸಂಧಾನ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಶಾಂತ್ ಸಿಂಬರ್ಗಿ, ‘ಶೃತಿ ಹರಿಹರನ್ ಬೆನ್ನ ಹಿಂದೆ ಇಬ್ಬರು ಕನ್ನಡದ ನಟರು ನಿಂತಿದ್ದು, ಎಲ್ಲದಕ್ಕೂ ಅವರೇ ಸೂತ್ರಧಾರರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.


‘ಶೃತಿ ಹರಿಹರನ್ ವಿರುದ್ಧ ಎಫ್‍ಐ ಆರ್ ದಾಖಲು ಮಾಡಿದ್ದೇವೆ. ಶೃತಿ ಹರಿಹರನ್ ವಿದೇಶದಲ್ಲಿಯ ಮಾಧ್ಯಮಗಳಿಗೆ ಹಣ ಕೊಟ್ಟು ಅರ್ಜುನ್ ಸರ್ಜಾರ ವಿರೋಧವಾಗಿ ತೋರಿಸಿದ್ದಾರೆ. ನ್ಯೂಯಾರ್ಕ್ ಸೇರಿದಂತೆ ಇತರೆ ದೇಶಗಳ ಮಾಧ್ಯಮಗಳಲ್ಲಿ ಅರ್ಜುನ್ ಸರ್ಜಾ ಮತ್ತು ಕುಟುಂಬದ ಬಗ್ಗೆ ಕೆಟ್ಟದಾಗಿ ತೋರಿಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.


‘ಈಗಾಗಲೇ 400 ಪುಟಗಳ ದೂರನ್ನು ಪೊಲೀಸ್ ಕಮೀಷನರ್ ಗೆ ಸಲ್ಲಿಸಿದ್ದೇವೆ. ಅಧಿಕಾರಿಗಳು ಪ್ರಕರಣವನ್ನು ಸೈಬರ್ ಕ್ರೈಂಗೆ ವರ್ಗಾಯಿಸಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಗಳ ಸ್ಕ್ರೀನ್ ಶಾಟ್, ಯುಆರ್‍ಎಲ್ ಎಲ್ಲವೂ ನಮ್ಮ ಬಳಿ ಲಭ್ಯವಿದೆ. ಈ ಮಾಧ್ಯಮಗಳಿಗೆ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಆಗಿದ್ದು, ಅದು ಯಾರ ಅಕೌಂಟ್ ಎಂಬುವುದರ ಬಗ್ಗೆ ನಮಗೆ ಗೊತ್ತಿದೆ. ಒಬ್ಬ ನಟನ ಖಾತೆಯಿಂದ ನೇರವಾಗಿ ಹಣ ವರ್ಗಾವಣೆ ಆಗಿದೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :