ಶಿವರಾಜ್ ನಿರ್ದೇಶನದ ಉಡುಂಬಾ ಚಿತ್ರ ಇದೇ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಕೊಂಚ ತಡವಾದರೂ ನಿಗಿನಿಗಿಸೋ ಕುತೂಹಲದ ಒಡ್ಡೋಲಗದೊಂದಿಗೇ ಈ ಚಿತ್ರ ಥೇಟರಿನತ್ತ ಹೊರಟಿದೆ. ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಲಾಂಚ್ ಆಗಿರೋ ಟ್ರೇಲರ್ ಮೂಲಕ ಉಡುಂಬಾನ ಮೇಲೆ ಗಾಢವಾದ ಭರವಸೆಯೊಂದು ಪ್ರೇಕ್ಷಕರಲ್ಲಿ ಪಡಿಮೂಡಿಕೊಂಡಿದೆ. ಇದು ನಿರ್ದೇಶಕರ ಪಾಲಿಗೆ ಮೊದಲ ಚಿತ್ರವೆಂಬುದನ್ನೂ ಮರೆಮಾಚುವಂತೆ ಉಡುಂಬಾ ಅಬ್ಬರ ಮೆರೆಯಲಾರಂಭಿಸಿದೆ. ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಒಂದಷ್ಟು ವರ್ಷಗಳ ಕಾಲ ಅನುಭವ ಹೊಂದಿರುವವರು ಶಿವರಾಜ್.