ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯುಐ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.ಇದೀಗ ಟೀಸರ್ ನೋಡಿದ ಜನ ಸಿನಿಮಾ ಹಾಲಿವುಡ್ ರೇಂಜ್ ನಲ್ಲಿದೆ ಎನ್ನುತ್ತಿದ್ದಾರೆ. ಯುಐ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಸಿನಿಮಾ ಕತೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ವಿಶೇಷವೆಂದರೆ ಸಾಧು ಕೋಕಿಲ ಡಿಫರೆಂಟ್ ಅವತಾರದಲ್ಲಿ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಮತ್ತು ಸಾಧು ಕೋಕಿಲ, ರವಿಶಂಕರ್ ಬಿಟ್ಟರೆ ಚಿತ್ರದ ಬೇರೆ ಯಾವುದೇ ಪಾತ್ರವನ್ನು ಟೀಸರ್ ನಲ್ಲಿ ರಿವೀಲ್ ಮಾಡಲಾಗಿಲ್ಲ.