ರಿಯಲ್ ಸ್ಟಾರ್ ಉಪೇಂದ್ರರ ಕಬ್ಜ ಟೀಂ ಸೇರಿಕೊಳ್ಳಲಿರುವ ಆ ಸ್ಟಾರ್ ಇವರೇ!

ಬೆಂಗಳೂರು| Krishnaveni K| Last Modified ಬುಧವಾರ, 13 ಜನವರಿ 2021 (08:57 IST)
ಬೆಂಗಳೂರು: ರಿಯಲ್‍ ಸ್ಟಾರ್ ಅಭಿನಯಿಸುತ್ತಿರುವ ಆರ್ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾಗೆ ಸ್ಟಾರ್ ನಟರೊಬ್ಬರ ಆಗಮನವಾಗಲಿದೆ. ಅವರು ಯಾರೆಂದು ನಾಳೆ ಅಂದರೆ ಸಂಕ್ರಾಂತಿ ದಿನ ತಂಡ ರಿವೀಲ್ ಮಾಡಲಿದೆ.
 

ಕಬ್ಜ ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಕಬ್ಜ ಟೀಂ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಉಪ್ಪಿ-ಕಿಚ್ಚ ಜೋಡಿ ಎರಡನೇ ಬಾರಿಗೆ ಜೊತೆಯಾಗಲಿದೆ. ಕಬ್ಜದಲ್ಲಿ ಸುದೀಪ್ ಅತಿಥಿ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನು ಅಧಿಕೃತವಾಗಿ ನಾಳೆ 10 ಗಂಟೆಗೆ ಕಬ್ಜ ಚಿತ್ರತಂಡ ಅನೌನ್ಸ್ ಮಾಡಲಿದೆ.




ಇದರಲ್ಲಿ ಇನ್ನಷ್ಟು ಓದಿ :