ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಫೀಲ್ಡಿಗೆ ಬರುತ್ತೇನೆಂದು ಘೋಷಿಸಿದ್ದರೆ, ಅವರ ಪುಟಾಣಿ ಮಗಳು ಐಶ್ವರ್ಯಾ ಚಿತ್ರರಂಗಕ್ಕೆ ಕಾಲಿಡಲಿದ್ದಾಳೆ. ಉಪೇಂದ್ರ-ಪ್ರಿಯಾಂಕ ಮುದ್ದಿನ ಮಗಳು ಐಶ್ವರ್ಯಾ ಅಮ್ಮನ ಜತೆ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾಳೆ. ಪ್ರಿಯಾಂಕ ಹೌರಾ ಬ್ರಿಡ್ಜ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ.ಅದೇ ಸಿನಿಮಾದಲ್ಲಿ ಪ್ರಿಯಾಂಕ ಜತೆ ಮಗಳು ಐಶ್ವರ್ಯಾ ಒಂದು ಪಾತ್ರ ಮಾಡುತ್ತಿದ್ದಾಳೆ ಎನ್ನುವುದು ಪಕ್ಕಾ ಆಗಿದೆ. ಕೋಲ್ಕೊತ್ತಾದಲ್ಲೇ ಚಿತ್ರೀಕರಣ ನಡೆಯುವ ಕಾರಣ, ತವರಿಗೂ