ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಿ.ಎನ್. ಸೀತಾರಾಮ್ ಅವರ ಜೊತೆ ಉಪೇಂದ್ರ ಅವರು ರಾಜಕೀಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಟಿ.ಎನ್. ಸೀತಾರಾಮ್, ಒಳ್ಳೆಯ ವಿಚಾರಧಾರೆ, ವೈಯಕ್ತಿಕ ಪ್ರಾಮಾಣಿಕತೆ ಇರುವ ಉಪೇಂದ್ರ ಅವರು ರಾಜಕೀಯಕ್ಕೆ ಬರುವುದು ಉತ್ತಮ ಎಂದು ಹೇಳಿದ್ದಾರೆ. ಸಿನಿಮಾಗಳಲ್ಲಿ ಹೊಸ ಹೊಸ ದೃಷ್ಟಿಕೋನಗಳನ್ನ ತೋರಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ವ್ಯವಸ್ಥೆಯಲ್ಲಿನ ಪ್ರಾಮಾಣಿಕ ಪ್ರಯತ್ನಗಳು ಒಂದೇ ಇರುತ್ತೆ.