ಸ್ಟಾರ್ ನಟರ ಸಿನಿಮಾಗಳನ್ನು ನೋಡುತ್ತಾ ಅವರಂತೆಯೇ ಆಗಬೇಕೆಂಬ ಕನಸು ಕಟ್ಟಿಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿ ನಟನೆಯ ಎಲ್ಲ ಪಟ್ಟುಗಳನ್ನೂ ಕಲಿತುಕೊಂಡು ಗುರಿ ಸೇರುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಅದರಲ್ಲಿಯೂ ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆ ಮತ್ತು ವಿಶಿಷ್ಟ ಫಿಲಾಸಫಿಗೆ ಮರುಳಾಗಿ ನಟನೆಯ ರೂಟು ಹಿಡಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ಸಾಲಿನಲ್ಲಿ ಈ ವಾಠರ ಬಿಡುಗಡೆಗೆ ರೆಡಿಯಾಗಿರುವ ವೇಷಧಾರಿ ಚಿತ್ರದ ನಾಯಕ ಆರ್ಯನ್ ಕೂಡಾ ಸೇರಿಕೊಳ್ಳುತ್ತಾರೆ.