ಬೆಂಗಳೂರು: ಹೈದರಾಬಾದ್ ಎನ್ ಕೌಂಟರ್ ವಿಚಾರದಲ್ಲಿ ಟ್ರೋಲ್ ಗೊಳಗಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ತಮ್ಮನ್ನು ಟೀಕಿಸಿದವರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.ಹೈದರಾಬಾದ್ ನಲ್ಲಿ ಎನ್ ಕೌಂಟರ್ ಆದವರೇ ನಿಜವಾಗಿಯೂ ರೇಪಿಸ್ಟ್ ಗಳೇ? ಅಥವಾ ಇವರ ಹಿಂದೆ ಪ್ರಭಾವಿಗಳ ಕೈವಾಡವಿದೆಯೇ? ಎಲ್ಲಾ ಪ್ರಭಾವಿಗಳಿಗೂ ಇದೇ ರೀತಿಯ ಶಿಕ್ಷೆಯಾಗುತ್ತಾ ಎಂದು ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದರು. ಎನ್ ಕೌಂಟರ್ ಮಾಡುವುದನ್ನೇ ವಿರೋಧಿಸುತ್ತಿರುವುದಕ್ಕೆ ಸಾಕಷ್ಟು ಜನ ಉಪೇಂದ್ರರನ್ನು ಟೀಕಿಸಿದ್ದರು.ಇದಕ್ಕೆಲ್ಲಾ ಉಪೇಂದ್ರ ಈಗ ಉತ್ತರ ಕೊಟ್ಟಿದ್ದಾರೆ.