ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಜನರಿಗೆ ತಲೆಯಲ್ಲಿ ಹುಳಬಿಟ್ಟಂತಾಗುವುದು ಸಹಜ. ಮೊನ್ನೆಯಷ್ಟೇ ಉಪೇಂದ್ರ ತಮ್ಮ ನಿರ್ದೇಶನದಲ್ಲಿ ಯುಐ ಎಂಬ ಸಿನಿಮಾ ಲಾಂಚ್ ಮಾಡಿದ್ದರು.ಬಹಳ ದಿನಗಳ ನಂತರ ಉಪೇಂದ್ರ ನಿರ್ದೇಶನ ಮಾಡುತ್ತಿರುವುದರಿಂದ ಮುಹೂರ್ತ ಕಾರ್ಯಕ್ರಮಕ್ಕೆ ಅವರ ಗೆಳೆಯರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ್ ಸೇರಿದಂತೆ ಅನೇಕರು ಬಂದು ಶುಭ ಹಾರೈಸಿದ್ದರು.ಈ ಸಿನಿಮಾ ಲಾಂಚ್ ಮಾಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಉಪೇಂದ್ರ ಇದನ್ನು ಸಿನಾಮ ಎಂದಿದ್ದಾರೆ.