ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ಕನ್ನಡ ಚಿತ್ರರಂಗ ಕರ್ನಾಟಕದ ರೈತರ ಪರವಾಗಿ ನಿಂತಿದೆ. ಮೊನ್ನೆ ನಡೆದಿದ್ದ ಬೆಂಗಳೂರು ಬಂದ್ ಗೂ ಸಹಕರಿಸಿತ್ತು.ಇದೀಗ ಉಪೇಂದ್ರ ಈ ಹಿಂದೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೇಳಿದ್ದ ಮಾತೊಂದನ್ನು ಉಲ್ಲೇಖಿಸಿ ಪೋಸ್ಟ್