ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರರಂತಹ ಫ್ಯಾಷನೇಟ್ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂದು ಕೆಲವರಿಗೆ ಕನಸಿರುತ್ತದೆ. ಅಂತಹವರಿಗೆ ಈಗ ಒಂದು ಅವಕಾಶ ಸಿಕ್ಕಿದೆ.ಉಪೇಂದ್ರ ನಿರ್ದೇಶಿಸಲಿರುವ ಹೊಸ ಸಿನಿಮಾಗೆ ಕಲಾವಿದರನ್ನು ಹುಡುಕಾಡುತ್ತಿದ್ದಾರೆ. ಹೊಸ ಕಲಾವಿದರು, ಪ್ರತಿಭಾವಂತರಿಗೆ ಅವಕಾಶ ನೀಡಲು ಉಪೇಂದ್ರ ಮುಂದಾಗಿದ್ದಾರೆ.14 ರಿಂದ 60 ವರ್ಷದೊಳಗಿನ ಕಲಾವಿದರು ತಾವು ನಟಿಸಿರುವ ದೃಶ್ಯದ ವಿಡಿಯೋ ತುಣುಕನ್ನು upendraproductions@gmail.com ಎಂಬ ಈಮೇಲ್ ವಿಳಾಸಕ್ಕೆ ಕಳುಹಿಸಿಕೊಟ್ಟರೆ ಸೂಕ್ತರಾದವರನ್ನು ಆಯ್ಕೆ ಮಾಡಲಾಗುವುದು ಎಂದು ಉಪೇಂದ್ರ ಪ್ರಕಟಣೆ ನೀಡಿದ್ದಾರೆ.