ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರಸ್ದಾರ ಧಾರವಾಹಿಯ ಚಿತ್ರೀಕರಣಕ್ಕೆ ಬಳಸಿದ್ದ ಮನೆಯ ವಿವಾದ ಮತ್ತೆ ಕಿಚ್ಚ ಸುದೀಪ್ ಕೊರಳಿಗೆ ಸುತ್ತಿಕೊಂಡಿದೆ.ಈ ಧಾರವಾಹಿಗೆ ಬಳಸಿದ್ದ ಚಿಕ್ಕಮಗಳೂರಿನ ಮನೆ ಮತ್ತು ಕಾಫಿ ಎಸ್ಟೇಟ್ ಲೊಕೇಶನ್ ನಲ್ಲಿ ಶೂಟಿಂಗ್ ನಡೆಸಿ ಪರಿಸರಕ್ಕೆ ಹಾನಿ ಮಾಡಿದ್ದಾರೆ ಎಂದು ಹಿಂದೊಮ್ಮೆ ತಕರಾರು ತೆಗೆದಿದ್ದ ಮಾಲಿಕ ದೀಪಕ್ ಮಯೂರ್ ಇದೀಗ ಮತ್ತೊಮ್ಮೆ ಸುದೀಪ್ ವಿರುದ್ಧ ಸಿಡಿದೆದ್ದಿದ್ದಾರೆ.ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಈ ಧಾರವಾಹಿ ಪ್ರಸಾರವಾಗಿತ್ತು. ಹೀಗಾಗಿ ಶೂಟಿಂಗ್ ಲೊಕೇಶನ್