ಬಿಗ್ ಬಾಸ್ ವಾಸುಕಿ ವೈಭವ್ ಹಾಡಿಗೆ ಕಿಚ್ಚ ಸುದೀಪ್ ಧ್ವನಿ: ಯೂ ಟ್ಯೂಬ್ ನಲ್ಲಿ ಈಗ ಟ್ರೆಂಡಿಂಗ್!

ಬೆಂಗಳೂರು| Krishnaveni K| Last Modified ಮಂಗಳವಾರ, 10 ಡಿಸೆಂಬರ್ 2019 (09:27 IST)
ಬೆಂಗಳೂರು: ಬಿಗ್ ಬಾಸ್ ನಲ್ಲಿ ಕಳಪೆ ಪ್ರದರ್ಶನ ಬೋರ್ಡ್ ಕೊಟ್ಟು ಜೈಲ್ ನಲ್ಲಿ ಕೂತಿದ್ದಾಗ ವಾಸುಕಿ ವೈಭವ್ ತಾವೇ ರಚಿಸಿ ಹಾಡಿದ ಹಾಡು ಮನಸ್ಸಿಂದ ಯಾರೂ ಕೆಟ್ಟೋರಲ್ಲ. ಈ ಹಾಡು ಆಗಲೇ ಭಾರೀ ಹಿಟ್ ಆಗಿತ್ತು.

 
ಆದರೆ ಮೊನ್ನೆ ವಾಸುಕಿ ಜನ್ಮದಿನಕ್ಕೆ ಕಿಚ್ಚ ಸುದೀಪ್ ಈ ಹಾಡನ್ನು ತಾವೇ ಹಾಡಿ ಆ ಧ್ವನಿಮುದ್ರಣವನ್ನು ವಾಸುಕಿಗೆ ಗಿಫ್ಟ್ ಆಗಿ ಕೇಳಿಸಿದ್ದರು. ಇದಕ್ಕೆ ಸ್ವತಃ ವಾಸುಕಿ ಖುಷಿಯಾಗಿದ್ದು ನೀವೆಲ್ಲಾ ನೋಡಿರುತ್ತೀರಿ. ಆ ಹಾಡು ತಮ್ಮ ಕೆಲವೇ ಕೆಲವು ಸ್ಪೆಷಲ್ ಹಾಡುಗಳಲ್ಲಿ ಒಂದು ಎಂದು ಕಿಚ್ಚ ಹೇಳಿಕೊಂಡಿದ್ದರು.
 
ಆ ಹಾಡೀಗ ಸಾಮಾಜಿಕ ಜಾಲತಾಣಗಳು ಮತ್ತು ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ಕಿಚ್ಚನ ಧ್ವನಿಯಲ್ಲಿ ಅದ್ಭುತವಾಗಿ ಬಂದಿರುವ ಈ ಹಾಡಿಗೆ ಲಕ್ಷಾಂತರ ಲೈಕ್ಸ್ ಬಂದಿವೆ. ಮುಂದೊಂದು ದಿನ ಕಿಚ್ಚ ಈ ಹಾಡನ್ನು ತಮ್ಮ ಸಿನಿಮಾದಲ್ಲಿ ಬಳಸಿಕೊಂಡರೂ ಅಚ್ಚರಿಯಿಲ್ಲ.
ಇದರಲ್ಲಿ ಇನ್ನಷ್ಟು ಓದಿ :