ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಪ್ರಮೋಷನ್ ತುಂಬಾ ಚೆನ್ನಾಗಿಯೇ ಪ್ಲಾನ್ ಮಾಡಲಾಗಿದೆ. ಸಿನಿಮಾದ ಪ್ರತಿ ಪೋಸ್ಟರ್ ಒಂದೊಂದು ಕಥೆ ಹೇಳುತ್ತವೆ. ಸಿನಿಮಾದ ಟೀಸರ್ ಇಡೀ ಕಥೆಯ ಝಲಕ್ ಅನ್ನ ಬಿಟ್ಟುಕೊಡುತ್ತಿವೆ. ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಿರೀಕ್ಷೆ ಮಾಡದ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ವೇದ ಹೆಸರಿನ ಪಾತ್ರ ಮಾಡೋ ಮೂಲಕ ಶಿವಣ್ಣ ತಮ್ಮ ಅಭಿನಯ ಕಲೆಯನ್ನ ಒರೆಗೆ ಹಚ್ಚಿದಂತೆ ಕಾಣುತ್ತಿದ್ದಾರೆ. ವೇದ ಚಿತ್ರದ ಪ್ರಚಾರದ ಪ್ಲಾನಿಂಗ್ ಪಕ್ಕಾ