ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಸನ್ಯಾಸಕ್ಕೆ ಮಹತ್ವದ ಸ್ಥಾನಮಾನಗಳಿದ್ದಾವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವಿಯ ಘನತೆ ಗೌರವಕ್ಕೆ ಕುಂದುಂಟು ಮಾಡುವಂಥಾ ಕೆಲ ವಿದ್ಯಮಾನಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕೆಲ ಕಳ್ಳ ಸನ್ಯಾಸಿಗಳು ಮುಗ್ಧ ಜನರನ್ನು ಯಾಮಾರಿಸುತ್ತಾ ಮುಂದುವರೆಯುತ್ತಿದ್ದರೆ, ಇತ್ತ ಪ್ರಜ್ಞಾವಂತರ ಖಾವಿಯತ್ತ ಅನುಮಾನದ ಕಣ್ಣಟಿಟ್ಟು ಕೂರುವಂತಾಗಿದೆ. ಈ ಮನಸ್ಥಿತಿಯಿಂದಲೇ ಕಾವಿಯೊಳಗೆ ಅವಿತಿರುವ ಕಳ್ಳ ಕಾಕರು ಅಡಿಗಡಿಗೆ ಬೆತ್ತಲಾಗುತ್ತಿದ್ದಾರೆ. ಈ ವಾರ ತೆರೆಗಾಣಲಿರುವ ವೇಷಧಾರಿ ಚಿತ್ರ ಕೂಡಾ ಇಂಥಾ ಮುಖವಾಡವನ್ನು ಕಳಚಿ ಬಿಸಾಡಲಿದೆಯಾ ಎಂಬೊಂದು