ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ ಶನಿ ಮಹದೇವಪ್ಪ ವಯೋಸಹಜ ಖಾಯಿಲೆಯಿಂದಾಗಿ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.ಸಕ್ಕರೆ ಖಾಯಿಲೆ, ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕನ್ನಡದಲ್ಲಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸಂಪತ್ತಿಗೆ ಸವಾಲ್, ಭಕ್ತ ಪ್ರಹ್ಲಾದ, ಶಂಕರ್ ಗುರು, ಕವಿರತ್ನ ಕಾಳಿದಾಸ, ಹಾಲು ಜೇನು, ರಣರಂಗ, ಚಕ್ರವ್ಯೂಹ ಮುಂತಾದ ಸೂಪರ್ ಹಿಟ್