ಕೋಝಿಕ್ಕೋಡ್: ಇತ್ತೀಚೆಗಷ್ಟೇ ಹಿರಿಯ ನಟ ಇನ್ನಸೆಂಟ್ ಸಾವಿನ ಆಘಾತಕ್ಕೀಡಾಗಿದ್ದ ಮಲಯಾಳಂ ಚಿತ್ರರಂಗಕ್ಕೆ ಇಂದು ಮತ್ತೊಬ್ಬ ಹಿರಿಯ ನಟನ ಅಗಲುವಿಕೆಯ ಶಾಕ್ ಸಿಕ್ಕಿದೆ.ಹಿರಿಯ ಪೋಷಕ ನಟ ಮಮ್ಮುಕೋಯಾ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಇದುವರೆಗೆ ಅವರು 450 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 800-90 ರ ದಶಕದ ಮಲಯಾಳಂ ಸಿನಿಮಾಗಳಲ್ಲಿ