ಧನುಷ್ ಬಿಟ್ಟು ಮತ್ತೊಬ್ಬ ನಟನೊಂದಿಗೆ ಸಿನಿಮಾ ಮಾಡಲು ಹೊರಟ ನಿರ್ದೇಶಕ ವೆಟ್ರಿಮಾರನ್

ಚೆನ್ನೈ| pavithra| Last Modified ಶುಕ್ರವಾರ, 31 ಜುಲೈ 2020 (12:09 IST)
ಚೆನ್ನೈ : ಖ್ಯಾತ ನಟ ಧನುಷ್ ಜೊತೆ ಯಾವಾಗಲೂ ಚಿತ್ರ ಮಾಡುವ ನಿರ್ದೇಶಕ ವೆಟ್ರಿಮಾರನ್ ಈ ಬಾರಿ ತಮಿಳಿನ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ಸಿನಿಮಾ ಮಾಡುತ್ತಿದ್ದಾರಂತೆ.

ಹೌದು. ನಿರ್ದೇಶಕ ವೆಟ್ರಿಮಾರನ್ ಅವರು ತಮಿಳಿನ ಖ್ಯಾತ ನಟ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರಂತೆ. ಅವರ ಮುಂದಿನ ಸಿನಿಮಾಕ್ಕೆ ವಿಜಯ್ ನಾಯಕರಾಗುತ್ತಿದ್ದರಂತೆ. ಈ ಮಾಹಿತಿ ಬಹುತೇಕ ಖಚಿತವಾಗಿದ್ದು, ವಿಜಯ್ ಕೈಲಿರುವ ಸಿನಿಮಾ ಮುಗಿದ ಬಳಿಕ ಈ ಸಿನಿಮಾ ಸೆಟ್ಟೇರಲಿದೆಯಂತೆ. ಈ ಸಿನಿಮಾವನ್ನು  ಎಲ್ರೆಡ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.

ಯಾವಾಗಲೂ ಧನುಷ್ ಜೊತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ವೆಟ್ರಿಮಾರನ್ ಈ ಬಾರಿ ವಿಜಯ್ ಜೊತೆ ಸಿನಿಮಾ ಮಾಡುತ್ತಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಆದರೆ ಈ ಸಿನಿಮಾಕ್ಕೆ ಧನುಷ್ ಅವರೇ ಆಯ್ಕೆಯಾಗಿದ್ದು, ಆದರೆ ಧನುಷ್ ಅವರ ಡೇಟ್ಸ್ ಸೆಟ್ ಆಗದ ಕಾರಣ ವಿಜಯ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಇನ್ನಷ್ಟು ಓದಿ :