ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಹಸಿಬಿಸಿ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ನಟ-ನಟಿಯರು ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸುತ್ತಾರೆ. ಈ ಕಾರಣಕ್ಕೇ ಹಲವು ಬಾರಿ ಈ ಶೋ ವಿವಾದಕ್ಕೊಳಗಾಗಿದ್ದಿದೆ.ಈ ವಾರ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ಭಾಗವಹಿಸಿದ್ದಾರೆ. ಲೈಗರ್ ಸಿನಿಮಾದ ಈ ಜೋಡಿ ಚಿತ್ರದ ಪ್ರಚಾರಾರ್ಥವಾಗಿ ಒಟ್ಟಾಗಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.ಈ ಬಗ್ಗೆ ಟೀಸರ್ ಒಂದನ್ನು ಹೊರಬಿಡಲಾಗಿದ್ದು, ಈ ಶೋನಲ್ಲಿ ವಿಜಯ್ ದೇವರಕೊಂಡಗೆ ಕೊನೆಯದಾಗಿ