ಹೈದರಾಬಾದ್: ಇತ್ತೀಚೆಗೆ ಲಾಲ್ ಸಿಂಗ್ ಛಡ್ಡಾ ಸಿನಿಮಾ ದಯನೀಯ ಸೋಲು ಅನುಭವಿಸಿದ್ದಕ್ಕೆ ನಟ ಅಮೀರ್ ಖಾನ್ ತಮ್ಮ ಸಂಭಾವನೆ ತ್ಯಾಗ ಮಾಡಿ ವಿತರಕರ ಕಷ್ಟಕ್ಕೆ ಸ್ಪಂದಿಸಿದ್ದರು. ಇದೀಗ ವಿಜಯ್ ದೇವರಕೊಂಡ ಕೂಡಾ ಅದೇ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.ಲೈಗರ್ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ದಯನೀಯ ಸೋಲು ಕಂಡಿದೆ. ಕೇವಲ ಶೇ.65 ಹಣ ಮಾತ್ರ ಬಂದಿದೆ. ಇದರಿಂದ ವಿತರಕರಿಗೆ ತೀವ್ರ ನಷ್ಟವಾಗಿದೆ.ಹೀಗಾಗಿ ವಿತರಕರಿಗಾದ ನಷ್ಟ ತುಂಬಿಕೊಡಲು ನಿರ್ಮಾಪಕ, ನಿರ್ದೇಶಕ ಪುರಿ ಜಗನ್ನಾಥ್ ಮುಂದಾಗಿದ್ದಾರೆ.