ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಲಿದೆ ಲಿಗರ್ ಚಿತ್ರತಂಡ

ಹೈದರಾಬಾದ್| pavithra| Last Modified ಶುಕ್ರವಾರ, 7 ಮೇ 2021 (09:08 IST)
ಹೈದರಾಬಾದ್ : ನಟ ಅವರು ಪ್ರಸ್ತುತ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ದ್ವಿಭಾಷಾ ಚಿತ್ರ ಲಿಗರ್  ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಲಿಗರ್ ಚಿತ್ರತಂಡ ಉಡುಗೊರೆಯೊಂದನ್ನು ನೀಡಲಿದ್ದಾರಂತೆ.
ಪುರಿ ಜಗನ್ನಾಥ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಮೂಲಕ ವಿಜಯ ದೇವರಕೊಂಡ ಅವರು ಬಾಲಿವುಡ್ ಪ್ರವೇಶಿಸಿದ್ದಾರೆ. ಇದರಲ್ಲಿ ಅನನ್ಯ ಪಾಂಡೆ ನಾಯಕಿಯಾಗಿ ನಟಿಸಲಿದ್ದಾರೆ.  ಇತ್ತೀಚಿನ ಮಾಹಿತಿ ಪ್ರಕಾರ ಲಿಗರ್ ಚಿತ್ರದ ನಿರ್ಮಾಪಕರು ವಿಜಯ್ ಅವರ ಜನ್ಮ ದಿನದ ಪ್ರಯುಕ್ತವಾಗಿ  ಅವರ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ.> > ವಿಜಯ್ ದೇವರಕೊಂಡ ಅವರು ಈ ತಿಂಗಳ 9ರಂದು ತಮ್ಮ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ. ಹಾಗಾಗಿ ಲಿಗರ್ ಚಿತ್ರತಂಡ  ಈ ಚಿತ್ರದ ಪ್ರಚಾರ ಮಾಡಲು ಮುಂದಾಗಿದೆ. ಅದಕ್ಕಾಗಿ ಟೀಸರ್ ಅಥವಾ ಚಿತ್ರಕ್ಕೆ ಸಂಬಂಧಪಟ್ಟ ಬೇರೆಯಾವುದಾದರೂ  ವಿಷಯವನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :