ಅಭಿಮಾನಿಗಳಿಗೆ ಈ ವಿಚಾರದಲ್ಲಿ ಖಡಕ್ ಎಚ್ಚರಿಕೆ ಕೊಟ್ಟ ವಿಜಯ್

ಚೆನ್ನೈ| pavithra| Last Modified ಮಂಗಳವಾರ, 10 ನವೆಂಬರ್ 2020 (13:00 IST)
ಚೆನ್ನೈ : ವಿಜಯ್ ಅಭಿಮಾನಿಗಳೆಲ್ಲರೂ ಒಗ್ಗೂಡಿಕೊಂಡು ವಿಜಯ್ ಪೀಪಲ್ಸ್ ಮೂವ್ಮೆಂಟ್ ಎಂಬ ಸಂಘಟನೆಯನ್ನು ಪ್ರಸ್ತುತ ಚುನಾವಣಾ ಆಯೋಗದಲ್ಲಿ ಪಕ್ಷವಾಗಿ ನೋಂದಾಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೆಲವರು ವದಂತಿ ಎಂದು ಹೇಳಿದರೆ ಇನ್ನೂ ಕೆಲವರು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಹಲವಾರು ವರ್ಷಗಳಿಂದ ವಿಜಯ್ ಅವರನ್ನು ರಾಜಕೀಯಕ್ಕೆ ಎಳೆಯುವ ಪ್ರಯತ್ನನಡೆಯುತ್ತಿತ್ತು. ಇದೀಗ 2021ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ  ವಿಜಯ್ ಅವರ ರಾಜಕೀಯ ಪಕ್ಷದ ಬಗ್ಗೆ ಮಾಹಿತಿಯು ಕೋಲಾಹಲಕ್ಕೆ ಕಾರಣವಾಗಿದೆ.

ಈ ಪರಿಸ್ಥಿತಿಯ ನಡುವೆ ವಿಜಯ್ ಪ್ರತಿಕ್ರಿಯಿಸಿ ತನ್ನ ತಂದೆ ಪಕ್ಷವನ್ನು ಪ್ರಾರಂಭಿಸಿದ್ದಾರೆ ಎಂದು ನಾನು ಮಾಧ್ಯಮಗಳ ಮೂಲಕ ಕೇಳಿದೆ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅಭಿಮಾನಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬಾರದು ಅಥವಾ ಪಕ್ಷಕ್ಕೆ ಸೇವೆ ಸಲ್ಲಿಸಬಾರದು. ನನ್ನ ಹೆಸರು ಅಥವಾ ಫೋಟೊ ಬಳಸಿ ಯಾವುದೇ ಸಮಸ್ಯೆಗಳಲ್ಲಿ ಸಿಲುಕಿದರೆ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :