Widgets Magazine

ಶೂಟಿಂಗ್ ವೇಳೆ ಪ್ರಾಣ ಪಣಕ್ಕಿಟ್ಟು ಸಿನಿಮಾ ದೃಶ್ಯಗಳಲ್ಲಿ ನಟಿಸಿದ ವಿಜಯ್ ಸಾಹಸ; ವಿಡಿಯೋ ವೈರಲ್

ಚೆನ್ನೈ| pavithra| Last Modified ಶನಿವಾರ, 17 ಅಕ್ಟೋಬರ್ 2020 (12:21 IST)
ಚೆನ್ನೈ : ಕಾಲಿವುಡ್ ನ ಖ್ಯಾತ ನಟ ವಿಜಯ್ ಅವರು ಪ್ರತಿಯೊಂದು ಚಿತ್ರದಲ್ಲೂ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ ಶೂಟಿಂಗ್ ವೇಳೆ ಎಲ್ಲರನ್ನೂ ಬೆರಗುಗೊಳಿಸುವಂತಹ ವಿಜಯ್ ಅವರ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು. ಈ ವಿಡಿಯೋದಲ್ಲಿ  ಇದುವರೆಗೆ ವಿಜಯ್ ನಟಿಸಿದ ಅನೇಕ ಚಿತ್ರಗಳಲ್ಲಿ  ಅವರೇ ಸ್ವತಃ ಡೋಪ್ ಇಲ್ಲದೆ ಅಪಾಯಕಾರಿ ದೃಶ್ಯಗಳಲ್ಲಿ ನಟಿಸಿದ್ದನ್ನು ಇದು ಒಳಗೊಡಿದೆ. ಅಲ್ಲದೇ  ‘ವೇಲಾಯುಥಮ್’ ಚಿತ್ರದ ಒಂದು ಹೋರಾಟದ ದೃಶ್ಯದಲ್ಲಿ 150 ಅಡಿ ಎತ್ತರದಲ್ಲಿ ಚಲಿಸುವ ರೈಲಿನಲ್ಲಿ ಸೇತುವೆಯ ಮೇಲೆ ವಿಜಯ್ ಸುತ್ತಿಗೆಯಿಂದ ಫೈಟ್ ಮಾಡುತ್ತಿದ್ದಾರೆ. ಇದನ್ನು ನೋಡಿ  ನಿರ್ದೇಶಕ ಮತ್ತು ಸ್ಟಂಟ್ ಮಾಸ್ಟರ್ ಆಶ್ಚರ್ಯಚಕಿತರಾಗಿದ್ದಾರೆ.

ಹಾಗೇ ಸೂಪರ್ ಹಿಟ್ ಚಿತ್ರ ‘ಕುಶಿ’ಯಲ್ಲಿ ವಿಜಯ್ ಅವರು ನ್ಯೂಜಿಲೆಂಡ್ ನ ಸೇತುವೆಯ  ಮೇಲೆ ಸ್ಟಂಟ್ ಮ್ಯಾನ್ ನ ಯಾವುದೇ ಸಹಾಯವಿಲ್ಲದೇ ಬಂಗೀ ಜಂಪಿಂಗ್  ಮಾಡುತ್ತಿರುವುದು ಕಂಡುಬರುತ್ತದೆ.ಇದರಲ್ಲಿ ಇನ್ನಷ್ಟು ಓದಿ :