ದುಬೈ: ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾದ ಗಳಿಗೆಯನ್ನು ವಿಕ್ರಾಂತ್ ರೋಣ ತಂಡ ಅಪರೂಪವಾಗಿಸಿದೆ. ದುಬೈ ಅತ್ಯಂತೆ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸುದೀಪ್ ರ ವಿಕ್ರಾಂತ್ ರೋಣ ಲುಕ್ ಅನಾವರಣಗೊಂಡಿದೆ.ನಿನ್ನೆ ರಾತ್ರಿ 9.30 ಕ್ಕೆ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣನ ಟೈಟಲ್ ಲೋಗೋ ಲಾಂಚ್ ಆಗಿದೆ. ಇಡೀ ಕಟ್ಟಡವೇ ಆರಂಭದಲ್ಲಿ ಕನ್ನಡ ಬಾವುಟದ ಬಣ್ಣದಿಂದ ಮಿಂಚಿದರೆ ಬಳಿಕ ಕಿಚ್ಚ ಸುದೀಪ್ 25 ನೇ ವರ್ಷಕ್ಕೆ ಅಭಿನಂದನೆ ಸಲ್ಲಿಸಿತು.