ವಿಕ್ರಾಂತ್ ರೋಣ ಸಿನಿಮಾ ಕಡೆಯಿಂದ ಗುಡ್ ನ್ಯೂಸ್

ಬೆಂಗಳೂರು| Krishnaveni K| Last Modified ಶನಿವಾರ, 17 ಜುಲೈ 2021 (09:20 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಸಿನಿಮಾ ತಂಡದ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
 > ಈ ಸಿನಿಮಾದ ಹಾಡಿನ ಚಿತ್ರೀಕರಣವೊಂದು ಬೆಂಗಳೂರಿನಲ್ಲಿ ವಿಶೇಷ ಸೆಟ್ ನಲ್ಲಿ ನಡೆದಿತ್ತು. ಈ ಹಾಡಿನ ಚಿತ್ರೀಕರಣದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಹೆಜ್ಜೆ ಹಾಕಿದ್ದರು. ಆ ಚಿತ್ರೀಕರಣವೀಗ ಮುಕ್ತಾಯವಾಗಿದೆ. ಇದರೊಂದಿಗೆ ವಿಕ್ರಾಂತ್ ರೋಣ ಶೂಟಿಂಗ್ ಮುಕ್ತಾಯವಾಗಿದೆ.>   ಈಗಾಗಲೇ ವಿಕ್ರಾಂತ್ ರೋಣ ಡಬ್ಬಿಂಗ್ ಕೆಲಸಗಳೂ ಭರದಿಂದ ಸಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಹೀಗಾಗಿ ಸದ್ಯದಲ್ಲೇ ವಿಕ್ರಾಂತ್ ರೋಣ ರಿಲೀಸ್ ಬಗ್ಗೆ ಅಭಿಮಾನಿಗಳಿಗೆ ಅಧಿಕೃತ ಮಾಹಿತಿ ದೊರೆಯುವುದು ಪಕ್ಕಾ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :