ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಟ್ರೈಲರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಿದೆ. 17 ಗಂಟೆಗಳ ಅವಧಿಯಲ್ಲಿ ಕೇವಲ ಕನ್ನಡ ಅವತರಣಿಕೆಯ ಟ್ರೈಲರ್ 60 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.ತೆಲುಗಿನಲ್ಲಿ 30 ಲಕ್ಷ, ಮಲಯಾಳಂನಲ್ಲಿ 10 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಟ್ರೈಲರ್ ವೀಕ್ಷಣೆ ಮಾಡಿದವರೆಲ್ಲರೂ ಉತ್ತಮ