ಈಗ ಎತ್ತ ನೋಡಿದರೂ ಸಿಂಗನದ್ದೇ ಸದ್ದು. ಟ್ರೈಲರ್ ಮತ್ತು ಹಾಡಿನ ಮೂಲಕ ಭಾರೀ ಕ್ರೇಜ್ ಹುಟ್ಟು ಹಾಕಿರೋ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಇದೇ ಹತ್ತೊಂಬತ್ತರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಇದು ಚಿರು ಸಿನಿ ಯಾನದಲ್ಲಿಯೇ ಮಹತ್ವ ದ ಚಿತ್ರವಾಗಿ ದಾಖಲಾಗುತ್ತಲೇ ದೊಡ್ಡ ಗೆಲುವನ್ನು ತನ್ನದಾಗಿಸಿಕೊಳ್ಳುವ ಶುಭ ಸೂಚನೆಗಳೇ ಎಲ್ಲೆಡೆ ಕಾಣಿಸುತ್ತಿದೆ. ಸಿಂಗ ಇಂಥಾದ್ದೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದೇ ತನ್ನ ಮಾಸ್ ಲುಕ್ಕಿನಿಂದ! ಈ ಹಿಂದೆ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಿದ್ದ