Widgets Magazine

ಅಪ್ಪ ಟೈಗರ್ ಮಗ ಮರಿ ಟೈಗರ್ ವಿನೋದ್ ಪ್ರಭಾಕರ್ ಹೊಸ ಚಿತ್ರದ ಕಥೆ!

ಬೆಂಗಳೂರು| Arunkumar| Last Modified ಶನಿವಾರ, 10 ಮೇ 2014 (10:49 IST)
ಟೈಗರ್ ಪ್ರಭಾಕರ್
ಅವರ
ಮಗ ವಿನೋದ್ ಪ್ರಭಾಕರ್
ಅಪ್ಪನನ್ನೇ ಹೋಲುವ ಮಗ. ಅಂದಿನ
ಟೈಗರ್ ಪ್ರಭಾಕರ್ ಇಂದು ಮಗನ ರೂಪದಲ್ಲಿ ಕಾಣಿಸುತ್ತಿದ್ದಾರೆ. ಈ ಕಾರಣದಿಂದ ವಿನೋದ್ ನಟಿಸುತ್ತಿರುವ ಹೊಚ್ಚ ಹೊಸ ಚಿತ್ರಕ್ಕೆ ಇದೆ ಹೆಸರು ನೀಡಲಾಗಿದೆ.
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ನಿರ್ಮಿಸುತ್ತಿರುವ 'ಮರಿಟೈಗರ್ ಚಿತ್ರದ ಹೆಸರು. ಇದರ ಅಂತಿಮ ಹಂತದ ಚಿತ್ರೀಕರಣ ಮೇ
ತಿಂಗಳ ಕೊನೆಗೆ ಆರಂಭವಾಗಲಿದೆ.ಪಿ.ಎನ್.ಸತ್ಯ ನಿರ್ದೇಶನದ ಈ ಚಿತ್ರಕ್ಕೆ ಅಜಯಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಕ್ ರವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಜೈಆನಂದ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಈಶ್ವರಿಕುಮಾರ್ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ನಾಗೇಂದ್ರಪ್ರಸಾದ್, ಕವಿರಾಜ್
ಮುಂತಾದವರು ಬರೆದಿದ್ದಾರೆ. ಕಮಲಸಾರಥಿ ತಂಗಾಳಿ ನಾಗರಾಜ್ ಚಿತ್ರಕ್ಕೆ ಸಂಭಾಷಣೆಯನ್ನೂ
ಮತ್ತು ಹಾಡನ್ನು ಸಹ ಬರೆದಿದ್ದಾರೆ.ವಿನೋದ್ ಪ್ರಭಾಕರ್ , ತೇಜು ಜೊತೆಯಲ್ಲಿ
ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ಭರತ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ .ಇದರಲ್ಲಿ ಇನ್ನಷ್ಟು ಓದಿ :