ಬೆಂಗಳೂರು: ಕೊರೋನಾ ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಹಲವು ವಲಯಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿದೆ. ಆದರೆ ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮಾತ್ರ ಸಡಿಲಿಸಿಲ್ಲ. ಈ ಬಗ್ಗೆ ಹಿರಿಯ ನಟಿ ಲೀಲಾವತಿ ಪುತ್ರ, ನಟ ವಿನೋದ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಲ್ಲಾ ಉದ್ಯಮದಂತೆ ಚಿತ್ರರಂಗವೂ ಒಂದು ಉದ್ಯಮ. ಅದನ್ನು ನಂಬಿಕೊಂಡು ಹಲವು ಕುಟುಂಬಗಳಿವೆ. ಹೀಗಾಗಿ ಇದನ್ನು ಕಡೆಗಣಿಸಬೇಡಿ ಎಂದಿದ್ದಾರೆ.ವಿಡಿಯೋ ಮೂಲಕ ಆಕ್ರೋಶ ಹೊರಹಾಕಿರುವ ವಿನೋದ್ ರಾಜ್, ಚಿತ್ರರಂಗದಲ್ಲಿ ಕಲೆಯನ್ನು ನಂಬಿ ಕೋಟ್ಯಂತರ