ಹೈದರಾಬಾದ್: ಸಾಯಿ ಪಲ್ಲವಿ-ರಾಣಾ ದಗ್ಗುಬಟ್ಟಿ ಅಭಿನಯದ ವಿರಾಟ ಪರ್ವಂ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳ ಮೊದಲು ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಚಿತ್ರದ ಗಳಿಕೆಗೆ ತೊಂದರೆ ಮಾಡಿತಾ ಎಂಬ ಅನುಮಾನ ಮೂಡಿದೆ.ನಕ್ಸಲೈಟ್ ಗಳ ಕತೆಯಾಧಾರಿತ ಸಿನಿಮಾ ‘ವಿರಾಟ ಪರ್ವಂ’. ಈ ಸಿನಿಮಾದ ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಿಡುಗಡೆ ಹಿಂದಿನ ದಿನ ಸಾಯಿ ಪಲ್ಲವಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ಗೋ