ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಬಾರಿ ದ್ವಿಪಾತ್ರದಲ್ಲಿ ನಟಿಸಿದ ದಾಖಲೆ ಮಾಡಿರುವುದು ಸಾಹಸಸಿಂಹ ವಿಷ್ಣುವರ್ಧನ್. ಅವರು ತಮ್ಮ ವೃತ್ತಿ ಜೀವನದಲ್ಲಿ ಎಷ್ಟು ಸಿನಿಮಾಗಳಲ್ಲಿ ದ್ವಿಪಾತ್ರ ಮಾಡಿದ್ದಾರೆ ಗೊತ್ತಾ?200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ವಿಷ್ಣುವರ್ಧನ್ ಸುಮಾರು 21 ಬಾರಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದು ವಿಶೇಷ ಸಾಧನೆಯೇ ಸರಿ. ಅದರಲ್ಲೂ ಈ ಪೈಕಿ ಎರಡು ಬಾರಿ ತ್ರಿಪಾತ್ರವನ್ನೂ ಮಾಡಿದ್ದಾರೆ.ಅವರು ದ್ವಿಪಾತ್ರದಲ್ಲಿ ನಟಿಸಿದ ಮೊದ ಸಿನಿಮಾ ಒಂದೇ ರೂಪ ಎರಡು ಗುಣ.