ಬೆಂಗಳೂರು: ಸ್ಯಾಂಡಲ್ ವುಡ್ ನ ಮೂವರು ಸ್ಟಾರ್ ಗಳಿಗೆ ಇಂದು ಜನ್ಮದಿನದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಶ್ರುತಿಗೆ ಇಂದು ಜನ್ಮದಿನ.ಅವರ ಪೈಕಿ ಸಾಹಸಸಿಂಹ ಇಂದು ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸವಿನೆನಪಿನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ವಿಷ್ಣು ಅಪ್ಪಟ ಅಭಿಮಾನಿ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ದಾದನಿಗೆ ವಿಶೇಷವಾಗಿ ಸಂದೇಶ ಬರೆದು ಸ್ಮರಿಸಿಕೊಂಡಿದ್ದಾರೆ. ಈವತ್ತು ಚಿತ್ರರಂಗದಲ್ಲಿ ನೀವಿರಬೇಕಿತ್ತು. ನಿಮಗೆ ನಮ್ಮ