ಕಮಲ್ ಹಾಸನ್ ಬೇರೆ ನಟರ ರೀತಿ ಆಸ್ತಿ ಮಾಡಿಲ್ಲ, ಅವರ ಆತ್ಮೀಯರೇ ಅವರಿಗೆ ಜೀವಸೆಲೆಯಾಗಿದ್ದರು. ಅವರನ್ನೆಲ್ಲ ಕಮಲ್ ಕಳೆದುಕೊಂಡಿದ್ದಾರೆ. ಕಮಲ್ ಹಾಸನ್`ಗೆ ನಾವಿದ್ದೇವೆ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ. ಇತ್ತೀಚೆಗೆ ನಿಧನರಾದ ಕಮಲ್ ಹಾಸನ್ ಹಿರಿಯಣ್ಣ ಚಂದ್ರ ಹಾಸನ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ರಜಿನಿ, ಅವರ ಪೀಳಿಗೆಯ ನಟರಿಗೆ ಹೋಲಿಸಿದರೆ ಆರ್ಥಿಕವಾಗಿ ಕಮಲ್ ಹಾಸನ್ ತಮಗಾಗಿ ಆಸ್ತಿ ಮಾಡಿಕೊಂಡಿಲ್ಲ. ಕೆ. ಬಾಲಚಂದರ್, ಅನಂತು, ಚಾರುಹಾಸನ್ ಮತ್ತು ಚಂದ್ರಹಾಸನ್ ಅವರನ್ನ